ಬಾದಾಮಿ: ಪಟ್ಟಣದ ಸಿ.ಆರ್.ಸಿ.ಕೇಂದ್ರದಲ್ಲಿ ಬಿ.ಆರ್.ಸಿ.ಕೇಂದ್ರ ಮತ್ತು ಹುನಗುಂದದ ಬರ್ಡ್ಸ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳ ಸಂಜ್ಞಾಭಾಷಾ ಕುರಿತು ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್.ಎಸ್.ಯಲಿಗಾರ, ಬರ್ಡ್ಸ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಅಗಸಿಮುಂದಿನ, ಸಂಪನ್ಮೂಲ ವ್ಯಕ್ತಿ ರವಿ ಆರ್, ಸಂಯೋಜಕ ಬಸವರಾಜ ಹಾಜರಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿದ ಶಾಲೆಗಳಿಂದ ಆಗಮಿಸಿದ 50 ಜನ ಶಿಕ್ಷಕರು ಹಾಜರಿದ್ದರು. BIERT ಎಸ್.ಎಸ್.ಚೌಕದ ಕಾರ್ಯಕ್ರಮವನ್ನು ನಿರೂಪಿಸಿದರು. ಎನ್.ಡಿ.ಬೀಳಗಿ ವಂದಿಸಿದರು.