ಬಿಜಾಪುರ ಇಂಟಿಗ್ರೆಟೆಡ್ ರೂರಲ್ ಡೆವ್ಹಲಪ್‌ಮೆಂಟ್ ಸೊಸಾಯಟಿ (ಬರ್ಡ್ಸ) ಹುನಗುಂದ ಹಾಗೂ ಎಕ್ಸಿಲೋ ಫಿನ್‌ಸರ್ವ ಪ್ರೈವೆಟ್ ಲಿಮಿಟೆಡ್ ಬಾಂಬೆ ಇವುಗಳ ಸಂಯುಕ್ತಾಶ್ರಯದಲ್ಲಿ ವಾಕ್ & ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ಶಿಬಿರ ಬರ್ಡ್ಸ ಹುನಗುಂದದಲ್ಲಿ ಜರುಗಿತು. ಶಿಬಿರದ ಉದ್ಘಾಟನೆಯನ್ನು ಸಂಸ್ಥೆಯ ಚೆರ‍್ಮನ್ನ ಪ್ರೋ.ಸಿ.ಜಿ.ಹವಾಲ್ದಾರ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಈಗಾಗಲೇ ಬರ್ಡ್ಸ ಸಂಸ್ಥೆ 12 ಶಿಬಿರಗಳನ್ನು ಬಾಗಲಕೊಟ ತಾಲೂಕಿನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿದ್ದೇವೆ. ಇದು 13 ನೇ ಶಿಬಿರ. ಶಿಬಿರದಲ್ಲಿ ಮಕ್ಕಳಿಗೆ ಸಂಜ್ಞಾ ಭಾಷೆ, ಲಿಪ್‌ಲ್ಯಾಂಗ್ವೇಜ ಹಾಗೂ ವಿವಿಧ ಚಟುವಟಿಕೆಗಳ ಉಪಯೋಗವನ್ನು ಮಾಡಿಕೊಳ್ಳಲು ತಿಳಿಸಿದರು. ಅಥಿತಿಗಳಾದ ತಾಲೂಕಾ ಎಂಆರ್‌ಡಬ್ಲೂ ಎಸ್.ಟಿ.ಬೀರಗೊಂಡರ ಮಾತನಾಡಿ ನಮ್ಮ ಅವಳಿ ತಾಲೂಕಿನ ಮಕ್ಕಳಿಗೆ ಶಿಬಿರ ಹಮ್ಮಿಕೊಂಡಿದ್ದು ಶ್ಲಾಘನೀಯ ಮಕ್ಕಳ ಉನ್ನತಿಗಾಗಿ ನಮ್ಮ ಇಲಾಖೆಯ ಸಹಾಯ ಸಹಕಾರ ನೀಡುತ್ತೇವೆ. ಎಂದರು. ಇನ್ನೂಬ್ಬ ಅಥಿತಿಗಳಾದ ಬಿಆರ್‌ಸಿಯ ಬಿಐಇಆರ್‌ಟಿ ಸುರೇಶ ಸೂಳಿಬಾವಿ ಮಾತನಾಡುತ್ತಾ ಶಿಕ್ಷಣ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಸದುಪಯೋಗ ತಪ್ಪದೇ ಪಡೆದುಕೊಳ್ಳಬೇಕು. ಶಾಲೆ ಬಿಡದಂತೆ ನೋಡಿಕೊಳ್ಳಬೇಕು. ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಿ ಉತ್ತಮ ವಿದ್ಯಾರ್ಥಿಗಳಾಗಲು ತಿಳಿಸಿದರು. ಪ್ರಾಸ್ತಾವಿಕವಾಗಿ ಮಹಾಂತೇಶ ಅಗಸಿಮುಂದಿನ ಮಾತನಾಡಿ ಪ್ರತಿ ವರ್ಷ ದಸರಾ ಹಾಗೂ ಬೇಸಿಗೆ ಶಿಬಿರ ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಿದ್ದು ಇಂತಹ ಶಿಬಿರಗಳು ಪ್ರತಿ ತಾಲೂಕಿನಲ್ಲಿ ನಡೆಯಬೇಕು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಾರ್ಯಕರ್ತರ ಸಹಕಾರ ಶ್ಲಾಘನೀಯವಾದದ್ದು ಎಂದು ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ರಂಗನಗೌಡ ದಂಡಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನಮ್ಮ ಸಂಸ್ಥೆಯು ತಡವಾದ ಬೆಳವಣಿಗೆಯ ಮಕ್ಕಳು, ವಾಕ್ & ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳು ಹಾಗೂ ಆರೈಕೆದಾರರ ಜತೆ ಕಳೆದ 15 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದೆ. ವಿವಿಧ ಇಲಾಖೆಗಳ ಸಹಕಾರ ಇದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಲಕ್ಷ್ಮೇಶ್ವರದ ಬಿ.ಡಿ ತಟ್ಟಿ ವಿಶೇಷ ಶಾಲೆಯ ಶಿಕ್ಷರಾದ ಶ್ರೀದೇವಿ, ನಿಂಗಪ್ಪ ರೋಣದ ಹಾಗೂ ಉಮೇಶ ಬಾಗವಹಿಸಿದ್ದಾರೆ. ಪ್ರಾರ್ಥನೆ ಶ್ರೀದೇವಿ ಸ್ವಾಗತ ಪ್ರವೀಣಕುಮಾರ ವಂದನಾರ್ಪಣೆ ನಾಗರತ್ನಾ ಮಾಡಿದರು. ಕಾರ್ಯಕ್ರಮವನ್ನು ಶರಣಮ್ಮ ನಡೆಸಿಕೊಟ್ಟರು. 3 ತಾಲೂಕುಗಳಿಂದ ಒಟ್ಟು 50 ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ