
“ಆರೈಕೆದಾರರು ಸಾಮಾಜಿಕ, ಆರ್ಥಿಕ ಹಾಗೂ ಮಾನಸಿಕವಾಗಿ ಸಧೃಡ ಆಗಲು ಉಧ್ಯಮಶಿಲರಾಗಬೇಕು”
ಬಾಗಲಕೋಟ: ಬಾಗಲಕೋಟ ಕೇರ‍್ಸ್ ಲೈವ್ಹಲಿಹುಡ್ ಪ್ರೊಡ್ಯುಸರ ಕಂಪನಿ ಲಿಮಿಟೆಡ್‌ದ ಪ್ರಥಮ ವಾರ್ಷಿಕೊತ್ಸವ ಉದ್ಘಾಟಿಸಿ ಮಾತನಾಡಿದ ಕೇರ‍್ಸ್ ವಲ್ಡ್ವೈಡ್ ಸಂಸ್ಥೆ ಇಂಗ್ಲೆAಡ್ ದ ಡಾ. ಅನಿಲ ಪಾಟೀಲರವರು ಮಾತನಾಡುತ್ತಾ ಕೇರ‍್ಸ ವರ್ಲ್ಡವೈಡ್ ಸಂಸ್ಥೆ ನಾಲ್ಕು ದೇಶಗಳಲ್ಲಿ ಎರಡು ಲಕ್ಷ ಮೂವತೈದು ಸಾವಿರ ಆರೈಕೆದಾರರ ಆರ್ಥಿಕ, ಸಾಮಾಜಿಕ ಹಾಗೂ ಸೈಕ್ಷಣಿಕ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸುತ್ತಿದೆ. ನಮ್ಮ ದೇಶದ 5 ರಾಜ್ಯಗಳಲ್ಲಿ ಕರ್ನಾಟಕ ರಾಜ್ಯದ 5 ಜಿಲ್ಲೆಗಳಲ್ಲಿ 5 ಸಂಸ್ಥೆಗಳ ಮೂಲಕ ಕೆಲಸ ನಿರ್ವಹಿಸುತ್ತಿದೆ. ಅದರಲ್ಲಿ ಬಾಗಲಕೋಟ ಜಿಲ್ಲೆಯ ಬರ್ಡ್ಸ ಸಂಸ್ಥೆ ಒಂದು ಬಾಗಲಕೋಟ ಜಿಲ್ಲೆಯ 9 ತಾಲೂಕುಗಳಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನೇತೃತ್ವದಲ್ಲಿ ಕೆಲಸ ನಿರ್ವಹಿಸುತ್ತಿದೆ. ಒಟ್ಟು 65 ಆರೈಕೆದಾರರ ಸಂಘ ರಚನೆ ಆಗಿವೆ. 9 ತಾಲೂಕಾ ಫೋರಂ, 1 ಜಿಲ್ಲಾ ಫೋರಂ ರಚನೆ ಆಗಿದೆ ಮುಂದುವರೆದು ಬಾಗಲಕೋಟ ಕೇರ‍್ಸ್ ಲೈವ್ಹಲಿಹುಡ್ ಪ್ರೊಡ್ಯುಸರ್ ಕಂಪನಿ ಲಿಮಿಟೆಡ್ ಸ್ಥಾಪನೆ ಮಾಡಿ ಕಳೆದ ಒಂದು ವರ್ಷದಲ್ಲಿ 15 ಲಕ್ಷ ಹಣಕಾಸಿನ ವ್ಯವಹಾರ ಮಾಡುತ್ತಿದೆ. 351 ಶೇರ ಮೆಂಬರ್ ಇದ್ದಾರೆ 116 ಆರೈಕೆದಾರರು ವಿವಿಧ ಜೀವನೋಪಾಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿವಿಧ ಆದಾಯ ಉತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಆಗಿದೆ ಎಂದರು.
ಪ್ರಥಮ ವಾರ್ಷಿಕೋತ್ಸವದ ವರದಿ ಬಿಡುಗಡೆ ಮಾಡಿ ಎಸ್.ಎಸ್.ಹುಬ್ಬಳ್ಳಿ ಪ್ರಾಚಾರ್ಯರು ಬಿವ್ಹಿವ್ಹಿಎಸ್ ಪಾಲಿಟೆಕ್ನಿಕ್ ಕಾಲೇಜ ಮಾತನಾಡಿ ಉಚಿತವಾಗಿ ಸೂರ್ಯನಿಂದ ವಿದ್ಯುತ್ ಸಿಗುತ್ತದೆ ಸೆಲ್ಕೋ ಸೋಲಾರ್ ವಿವಿಧ ಆದಾಯ ಉತ್ಪಾದಕ ಚಟುವಟಿಕೆ ರಿಯಾಯತಿ ದರದಲ್ಲಿ ಸಿಗುತ್ತವೆ. ಆರೈಕೆದಾರರು ಉಪಯೋಗ ಮಾಡಿಕೊಳ್ಳಲು ಮಾಹಿತಿ ನೀಡಿದರು. ಶ್ರೀ ನಟೇಶ ಎನ್.ಕೆ, ಶ್ರೀ ಶಿವಕುಮಾರ ಕೆ, ಪ್ರದೀಪ ಖಟಾವಕರ, ರಂಗನಗೌಡ ದಂಡಣ್ಣವರ, ಡಿ.ಎಸ್.ಹವಾಲ್ದಾರ ಉಪಸ್ಥಿತರಿದ್ದರು. ಬರ್ಡ್ಸ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಳೆದ 4 ವರ್ಷಗಳಿಂದ ಆರೈಕೆದಾರರ ಕುರಿತು ನಡೆದ ಕಂಪನಿ ಕಳೆದ ಒಂದು ವರ್ಷಗಳಿಂದ ನಡೆದು ಬಂದ ದಾರಿ ಕುರಿತು ವಿವರಿಸಿದರು.
ಅಧ್ಯಕ್ಷತೆಯನ್ನು ವೇದಾವತಿ ಹವೇಲಿಯವರು ವಹಿಸಿದ್ದರು ಸ್ವಾಗತವನ್ನು ವಿಜಯಲಕ್ಷೀ ಚಂಡಿ ಮಾಡಿದರು ವಂದನಾರ್ಪಣೆಯನ್ನು ಜೀಬಾ ಅಕ್ತರ ಕಲಾದಗಿ ಮಾಡಿದರು. ವಿಜಯಲಕ್ಷೀ ಶಿವಯೋಗಿ ಕಾರ್ಯಕ್ರಮ ನಡೆಸಿದರು. ಆರೈಕೆದಾರರಾದ ದೀಪಾ ಕಾಟಣ್ಣವರ, ಶಾಂತಾ ಚಳಗೇರಿ, ಆಶಾ ಶಿಂಧೆ, ಗೀತಾ ಮಣ್ಣೂರ , ಸುಜಾತಾ ಗಿರಡ್ಡಿ ತಮ್ಮ ಆರೈಕೆದಾರರ ಸಮಸ್ಯೆ ಹಾಗೂ ಕಂಪನಿ ಅನುಭವ ಕುರಿತು ಮಾತನಾಡಿದರು.