
ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿಗಳು ಶ್ರೀ ಸಿದ್ದರಾಮಯ್ಯನವರು ಇಲಾಖೆ ಸಚಿವೆ ಸನ್ಮಾನ್ಯ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ ಅವರಿಂದ ನಮ್ಮ ಬಿಜಾಪುರ ಇಂಟಿಗ್ರೆಟೆಡ್ ರೂರಲ್ ಡೆವೆಲಪ್ಪಮೆಂಟ ಸೊಸೈಟಿ (ಬರ್ಡ್ಸ) ಹುನಗುಂದ, ಗೆ ಅತ್ಯುತ್ತಮ ಸೇವೆಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಅವರು ಸಂಸ್ಥೆಯ ಪರವಾಗಿ ಸನ್ಮಾನ ಸ್ವೀಕರಿಸುವ ಸಂದರ್ಭದಲ್ಲಿ ಸಂಸ್ಥೆಯ ಚೇರಮನ್ ಪ್ರೊ. ಸಿ ಜಿ ಹವಾಲ್ದಾರ್, ಉಪಾಧ್ಯಕ್ಷರು ರಂಗನಗೌಡ ದಂಡಣ್ಣವರ ವೇದಿಕೆಯಲ್ಲಿದ್ದರು.